phonepe bike insurance: ಫೋನ್ ಪೇ ಮೂಲಕ 2 ನಿಮಿಷದಲ್ಲಿ ಬೈಕ್ ಇನ್ಸೂರೆನ್ಸ್ ಮಾಡಿಸಲು ಈ ರೀತಿ ಅಪ್ಲೈ ಮಾಡಿ

phonepe bike insurance:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮ್ಮ ಬೈಕ್ ಇದೆಯಾ ಅಥವಾ ಯಾವುದೇ ವಾಹನ ಇದೆಯಾ ಹಾಗಾದರೆ ನೀವು ಎರಡು ನಿಮಿಷದಲ್ಲಿ ಬೈಕ್ ಇನ್ಸೂರೆನ್ಸ್ ಅಥವಾ ಯಾವುದೇ ಇತರ ವಾಹನದ ಇನ್ಸೂರೆನ್ಸ್ ಅನ್ನು ನಿಮ್ಮ ಮೊಬೈಲ್ ಮೂಲಕ ತೆಗೆದುಕೊಳ್ಳಬಹುದು ಅದು ಹೇಗೆ ಎಂದು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ

ಕೆನರಾ ಬ್ಯಾಂಕ್ ಮೂಲಕ ಕೇವಲ ಹತ್ತು ನಿಮಿಷದಲ್ಲಿ 10,000 ಇಂದ 1 ಲಕ್ಷ ವರೆಗೆ ಸಾಲ ಪಡೆದುಕೊಳ್ಳಿ ಇಲ್ಲಿದೆ ಮಾಹಿತಿ 

ಹೌದು ಸ್ನೇಹಿತರೆ ಬೈಕು ಅಥವಾ ವಾಹನಗಳು ಹೊಂದಿರುವಂತಹ ಪ್ರತಿಯೊಬ್ಬರು ಇನ್ಸೂರೆನ್ಸ್ ಮಾಡಿಸುವುದು ಕಡ್ಡಾಯವಾಗಿದೆ ಹಾಗಾಗಿ ನಿಮ್ಮ ಬಳಿ ಯಾವುದಾದರೂ ಒಂದು ಇನ್ಸೂರೆನ್ಸ್ ಇರಬೇಕು ಆದ್ದರಿಂದ ಈ ಒಂದು ಲೇಖನಿಯಲ್ಲಿ ಯಾವ ರೀತಿ ಇನ್ಸೂರೆನ್ಸ್ ಗಳಿವೆ ಹಾಗೂ ನಿಮ್ಮ ಮೊಬೈಲ್ ಮೂಲಕ ಯಾವ ರೀತಿ ಇನ್ಸೂರೆನ್ಸ್ ಮಾಡಿಸುವುದು ಎಂಬ ಮಾಹಿತಿಯನ್ನು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ ಇದೇ ರೀತಿ ಇನ್ಸೂರೆನ್ಸ್ ಗೆ ಸಂಬಂಧಿಸಿದಂತೆ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಬೇಗ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

 

WhatsApp Group Join Now
Telegram Group Join Now       

ವಾಹನದ ಇನ್ಸೂರೆನ್ಸ್ (phonepe bike insurance)..?

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ವಾಹನಗಳನ್ನು ಬಳಸುತ್ತಿದ್ದಾರೆ ನಿಮ್ಮ ಬಳಿ ಯಾವುದೇ ಒಂದು ದ್ವಿಚಕ್ರ ವಾಹನ ಅಥವಾ ನಾಲ್ಕು ಚಕ್ರದ ವಾಹನ ಇದ್ದರೆ ಕಡ್ಡಾಯವಾಗಿ ನೀವು ಇನ್ಸೂರೆನ್ಸ್ ಮಾಡಿಸಬೇಕಾಗುತ್ತದೆ ಹಾಗಾಗಿ ನೀವು ಬೈಕ್ ಅಥವಾ ಇತರ ವಾಹನದ ಇನ್ಸೂರೆನ್ಸ್ ಮಾಡಿಸಬೇಕಾದರೆ ಯಾವ ಇನ್ಶುರೆನ್ಸ್ ಮಾಡಿಸುವುದು ಸೂಕ್ತ ಹಾಗೂ ಯಾವ ರೀತಿ ಎರಡು ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕ ಇನ್ಸೂರೆನ್ಸ್ ಅನ್ನು ತೆಗೆದುಕೊಳ್ಳಬಹುದು ಎಂಬ ಮಾಹಿತಿಯನ್ನು ತಿಳಿಸಿಕೊಡುತ್ತಿದ್ದೇವೆ

phonepe bike insurance
phonepe bike insurance

 

ಹೌದು ಸ್ನೇಹಿತರೆ ನೀವೇನಾದರೂ ಬೈಕ್ ಇನ್ಸೂರೆನ್ಸ್ ಅಥವಾ ಇತರ ಯಾವುದೇ ಇನ್ಶೂರೆನ್ಸ್ ಗಳನ್ನು ತೆಗೆದುಕೊಳ್ಳುತ್ತಿದ್ದರೆ ಕಡ್ಡಾಯವಾಗಿ ಕೆಲವೊಂದು ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕು ವಾಹನದ ಇನ್ಸೂರೆನ್ಸ್ ಗಳಲ್ಲಿ ಸಾಕಷ್ಟು ವಿವಿಧ ರೀತಿ ಇನ್ಸೂರೆನ್ಸ್ ಗಳು ಬರುತ್ತವೆ. ಅದರಲ್ಲಿ ಪ್ರಮುಖವಾಗಿ ಮೂರು ಇನ್ಸೂರೆನ್ಸ್ ಗಳು ನಿಮಗೆ ನೋಡಲು ಸಿಗುತ್ತವೆ ಹಾಗಾಗಿ ಇದರ ಬಗ್ಗೆ ವಿವರಗಳನ್ನು ಕೆಳಗಡೆ ವಿವರಿಸಲಾಗಿದೆ

 

WhatsApp Group Join Now
Telegram Group Join Now       

ಎಷ್ಟು ರೀತಿ ವಾಹನದ ಇನ್ಸೂರೆನ್ಸ್ ಗಳಿಗೆ (phonepe bike insurance)..?

ಸ್ನೇಹಿತರೆ ಯಾವುದೇ ಒಂದು ವಾಹನ ತೆಗೆದುಕೊಂಡರೆ ನೀವು ಪ್ರಮುಖವಾಗಿ ಇವು ಮೂರು ಇನ್ಸೂರೆನ್ಸ್ ಗಳಲ್ಲಿ ಯಾವುದಾದರೂ ಒಂದು ಇನ್ಶೂರೆನ್ಸ್ ಮಾಡಿಸಬೇಕಾಗುತ್ತದೆ ಹಾಗಾಗಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಕೆಳಗಡೆ ವಿವರಿಸಿದ್ದೇವೆ

1) ಮೂರನೇ ವ್ಯಕ್ತಿ ಬೈಕ್ ವಿಮೆ (Third party bike insurance)

2) ಸಮಗ್ರ ಬೈಕ್ ವಿಮೆ(comprehensive bike insurance)

3) ಸ್ವಂತ ಹಾನಿ ಬೈಕ್ ವಿಮೆ (Own damage bike insurance)

 

1) ಮೂರನೇ ವ್ಯಕ್ತಿ ಬೈಕ್ ವಿಮೆ (Third party bike insurance):- ಸ್ನೇಹಿತರೆ ಈ ಒಂದು ಇನ್ಸೂರೆನ್ಸ್ ಅನ್ನು ಪ್ರತಿಯೊಬ್ಬರೂ ಮಾಡಿಸಬೇಕಾಗುತ್ತದೆ ಏಕೆಂದರೆ ಏಕೆಂದರೆ ವಾಹನ ಖರೀದಿ ಮಾಡುವಂತವರು ಪ್ರತಿಯೊಬ್ಬರು ಥರ್ಡ್ ಪಾರ್ಟಿ ಇನ್ಸೂರೆನ್ಸ್ ಮಾಡಿಸಲೇಬೇಕು ಹಾಗಾಗಿ ಈ ಇನ್ಶುರೆನ್ಸ್ ಪ್ರಾಮುಖ್ಯತೆ ಏನೆಂದರೆ ಉದಾಹರಣೆ:- ಈ ಒಂದು ಇನ್ಸೂರೆನ್ಸ್ ಮಾಡಿಸಿದರೆ ಒಂದು ವೇಳೆ ಆಕ್ಸಿಡೆಂಟ್ ಅಥವಾ ಇತರ ಕಾರಣಗಳಿಂದ ಬೇರೆ ವ್ಯಕ್ತಿಗೆ ಅಂದರೆ ನೀವು ಆಕ್ಸಿಡೆಂಟ್ ಮಾಡಿದಂತ ವ್ಯಕ್ತಿಗೆ ಅಥವಾ ವಾಹನಕ್ಕೆ ಯಾವುದಾದರೂ ಡ್ಯಾಮೇಜ್ ಅಥವಾ ಅಪಘಾತಕ್ಕೆ ಸಂಬಂಧಿಸಿದಂತೆ ಎಲ್ಲಾ ಖರ್ಚು ವೆಚ್ಚಗಳನ್ನು ಈ ಒಂದು ಇನ್ಸೂರೆನ್ಸ್ ನಲ್ಲಿ ಕವರ್ ಆಗುತ್ತೆ

ಆದರೆ ಈ ಇನ್ಶೂರೆನ್ಸ್ ಮಾಡಿಸುವುದರಿಂದ ನಿಮ್ಮ ಬೈಕಿಗೆ ಅಥವಾ ನಿಮಗೆ ಯಾವುದಾದರೂ ಅಪಘಾತವಾದರೆ ಅಥವಾ ಏನಾದರೂ ಡ್ಯಾಮೇಜ್ ಆದರೆ ಈ ಇನ್ಸೂರೆನ್ಸ್ನಲ್ಲಿ ಕವರ್ ಆಗುವುದಿಲ್ಲ ಹಾಗೂ ಇದು ಕಡಿಮೆ ಬೆಲೆಯ ಇನ್ಸೂರೆನ್ಸ್ ಆಗಿರುತ್ತೆ

 

2) ಸಮಗ್ರ ಬೈಕ್ ವಿಮೆ (comprehensive bike insurance):- ಸ್ನೇಹಿತರೆ ಈ ಒಂದು ಇನ್ಸೂರೆನ್ಸ್ ಅನ್ನು ಪ್ರತಿಯೊಬ್ಬರೂ ಮಾಡಿಸಬೇಕು ಏಕೆಂದರೆ ಈ ಒಂದು ಇನ್ಸೂರೆನ್ಸ್ ಮಾಡಿಸುವುದರಿಂದ ನಿಮ್ಮ ಬೈಕಿಗೆ ಮತ್ತು ನಿಮಗೆ ಹಾಗೂ ಮೂರನೇ ವ್ಯಕ್ತಿಗೆ ಹಾಗೂ ಎಲ್ಲಾ ರೀತಿ ಅಪಘಾತಕ್ಕೆ ಸಂಬಂಧಿಸಿದಂತೆ ಈ ಒಂದು ಇನ್ಸೂರೆನ್ಸ್ನಲ್ಲಿ ಕವರ್ ಆಗುತ್ತೆ ಹಾಗಾಗಿ ಈ ಒಂದು ಇನ್ಸೂರೆನ್ಸ್ ಮಾಡಿಸುವುದು ತುಂಬಾ ಸೂಕ್ತ ಎಂದು ನನ್ನ ಅನಿಸಿಕೆ

3) ಸ್ವಂತ ಹಾನಿ ಬೈಕ್ ವಿಮೆ (one damage bike insurance):- ಈ ಒಂದು ಬೈಕ್ ಇನ್ಸೂರೆನ್ಸ್ ನಲ್ಲಿ ನೀವು ನಿಮ್ಮ ಗಾಡಿಗೆ ನೀವೇ ಹಾನಿ ಉಂಟು ಮಾಡಿದ್ದು ಹಾಗೂ ಇತರ ಸಂದರ್ಭದಲ್ಲಿ ಬೆಂಕಿ ಅಪಘಾತ ಹಾಗೂ ಇತರ ಸಂದರ್ಭದಲ್ಲಿ ಡ್ಯಾಮೇಜ್ ಒಳಗಾದರೆ ಈ ಒಂದು ಇನ್ಸೂರೆನ್ಸ್ನಲ್ಲಿ ನಿಮಗೆ ಕವರ್ ಆಗುತ್ತೆ

 

ಬೈಕ್ ಇನ್ಸೂರೆನ್ಸ್ ತೆಗೆದುಕೊಳ್ಳುವುದು ಹೇಗೆ (phonepe bike insurance)..?

ಹೌದು ಸ್ನೇಹಿತರೆ ಈ ಮೇಲೆ ಕಾಣಿಸಿದಂತ ಯಾವುದಾದರು ಒಂದು ಇನ್ಸೂರೆನ್ಸ್ ಅನ್ನು ನೀವು ತೆಗೆದುಕೊಳ್ಳಬೇಕಾದರೆ ಅಥವಾ ಎರಡೇ ನಿಮಿಷದಲ್ಲಿ ನಿಮ್ಮ ಫೋನ್ ಪೇ ಮೂಲಕ ಬೈಕ್ ಇನ್ಸೂರೆನ್ಸ್ ಯಾವ ರೀತಿ ತೆಗೆದುಕೊಳ್ಳುವುದು ಎಂಬುದನ್ನು ನೋಡೋಣ

phonepe bike insurance
phonepe bike insurance

 

ಸ್ನೇಹಿತರ ಮೊದಲು ನೀವು ಫೋನ್ ಪೇ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ ನಂತರ ನಿಮಗೆ ಅಲ್ಲಿ ಬೈಕ್ ಇನ್ಸೂರೆನ್ಸ್ ಎಂದು ಸರ್ಚ್ ಮಾಡಿ ಅಥವಾ ಫೋನ್ ಪೇ ಅಪ್ಲಿಕೇಶನ್ ಅನ್ನು ಸ್ವಲ್ಪ ಮೇಲೆ ಎತ್ತಿ. ಅಲ್ಲಿ ನಿಮಗೆ ಬೈಕ್ ಇನ್ಸೂರೆನ್ಸ್ ಎಂದು ಕಾಣುತ್ತದೆ

phonepe bike insurance
phonepe bike insurance

 

ನಂತರ ಅಲ್ಲಿ ನಿಮ್ಮ ಬೈಕ್ ಗೆ ಸಂಬಂಧಿಸಿದಂತೆ ನಂಬರ್ ಎಂಟರ್ ಮಾಡಿ ನಂತರ ನೀವು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಅಲ್ಲಿ ಹಲವು ರೀತಿ ಬೈಕ್ ಇನ್ಸೂರೆನ್ಸ್ ಕಾಣುತ್ತದೆ ಅಲ್ಲಿ ನೀವು comprehensive ಆಯ್ಕೆ ಮಾಡಿಕೊಳ್ಳಿ ನಂತರ ಅಲ್ಲಿ ನಿಮಗೆ ಪರ್ಸನಲ್ ಆಕ್ಸಿಡೆಂಟ್ ಕವರ್ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಆಕ್ಸಿಡೆಂಟ್ ಆದಂತಹ ಸಂದರ್ಭದಲ್ಲಿ ನಿಮಗೆ ಏನಾದರೂ ಗಾಯಗಳು ಅಥವಾ ಸೀರಿಯಸ್ ಮುಂತಾದವುಗಳನ್ನು ಅಥವಾ ಹಾಸ್ಪಿಟಲ್ ಗೆ ಸಂಬಂಧಿಸಿದಂತೆ ಖರ್ಚು ವೆಚ್ಚಗಳು ಈ ಒಂದು ಇನ್ಸೂರೆನ್ಸ್‌ನಲ್ಲಿ ಕವರ್ ಆಗುತ್ತದೆ

phonepe bike insurance
phonepe bike insurance

 

ಹಾಗಾಗಿ ಇದು ನಿಮಗೆ ಬೇಕಾದರೆ ಆಯ್ಕೆ ಮಾಡಿಕೊಳ್ಳಿ ಜಸ್ಟ್ ನಿಮಗೆ ಐನೂರು ಇಂದ ಸಾವಿರಕ್ಕೂ ಅಷ್ಟೇ ಹೆಚ್ಚು ಆಗಬಹುದು ಇದು ಮಾಡಿಸುವುದು ತುಂಬಾ ಉಪಯುಕ್ತ ಏಕೆಂದರೆ ಯಾವ ಸಂದರ್ಭದಲ್ಲಿ ಏನು ಆಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ

ನಂತರ ಅದನ್ನು ಆಯ್ಕೆ ಮಾಡಿಕೊಂಡಾಗ ನೀವು ಅಲ್ಲಿ ಎಷ್ಟು ವರ್ಷದ ಇನ್ಸೂರೆನ್ಸ್ ಮಾಡಿಸಲು ಬಯಸುತ್ತೀರಿ ಅಷ್ಟು ವರ್ಷವನ್ನು ಸೆಲೆಕ್ಟ್ ಮಾಡಿಕೊಳ್ಳಿ ನಂತರ ನಿಮಗೆ ಬೇಕಾದಂತ ಕಂಪನಿಗಳ ವಿವರಗಳು ಕೆಳಗಡೆ ಕಾಣುತ್ತವೆ ಅಲ್ಲಿ ನಿಮಗೆ ಯಾವ ಕಂಪನಿ ಬೆಸ್ಟ್ ಇನ್ಸೂರೆನ್ಸ್ ವ್ಯಾಲ್ಯೂ ನೀಡುತ್ತದೆ ಎಂದು ಆಯ್ಕೆ ಮಾಡಿಕೊಂಡು ಆ ಒಂದು ಇನ್ಸೂರೆನ್ಸ್ ಮೇಲೆ ಕ್ಲಿಕ್ ಮಾಡಿ

phonepe bike insurance
phonepe bike insurance

 

ನಂತರ ನೀವು ಹಿಂದೆ ಬೈಕ್ ಇನ್ಸೂರೆನ್ಸ್ ತೆಗೆದುಕೊಂಡಿದ್ದರೆ ಅಲ್ಲಿ ನೀವು ಇಂದಿನ ಪಾಲಿಸಿ ಇನ್ಸೂರೆನ್ಸ್ ಡೇಟ್ ಅನ್ನು ನಮೂದಿಸಿ ನಂತರ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ

phonepe bike insurance
phonepe bike insurance

 

ನಂತರ ಅಲ್ಲಿ ನೀವು ನಿಮ್ಮ ಇನ್ಸೂರೆನ್ಸ್ ಗೆ ಸಂಬಂಧಿಸಿದಂತ ನಾಮಿನಿ ಹೆಸರು ಹಾಗೂ ಇತರ ವಿವರಗಳನ್ನು ಎಂಟರ್ ಮಾಡಿ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಹಣ ಪೇ ಮಾಡಲು ಕೇಳುತ್ತದೆ ಅಲ್ಲಿ ನೀವು ಒಂದು ವರ್ಷಕ್ಕೆ ಎಷ್ಟು ಹಣ ಆಗುತ್ತೆ ಅಥವಾ ನೀವು ಎಷ್ಟು ವರ್ಷದ ಇನ್ಸೂರೆನ್ಸ್ ತೆಗೆದುಕೊಂಡಿದ್ದೀರಿ ಎಂಬ ಆಧಾರದ ಮೇಲೆ ಹಣವನ್ನು ಪೇ ಮಾಡಿ

ನಂತರ ನಿಮಗೆ ಕನ್ಫರ್ಮೇಶನ್ ಒಂದು ಮೇಲ್ ಬರುತ್ತದೆ ಹಾಗೂ ಇನ್ಸೂರೆನ್ಸಿಗೆ ಸಂಬಂಧಿಸಿದಂತಹ ಡಾಕ್ಯುಮೆಂಟ್ಸ್ ಗಳು ಕೂಡ ಪಿಡಿಎಫ್ ರೂಪದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

ವಿಶೇಷ ಸೂಚನೆ:- ಬೈಕ್ ಇನ್ಸೂರೆನ್ಸ್ ಅಥವಾ ಇತರ ಯಾವುದೇ ಇನ್ಶೂರೆನ್ಸ್ ತೆಗೆದುಕೊಳ್ಳುವಾಗ ಅದರಲ್ಲಿ ನೀಡಿದಂತಹ ನಿಯಮಗಳು ಮತ್ತು ಶರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ಹಾಗೂ ನಿಮಗೆ ಒಪ್ಪಿಗೆ ಆದ ನಂತರ ಮಾತ್ರ ನೀವು ಇನ್ಸೂರೆನ್ಸ್ ಪಡೆದುಕೊಳ್ಳಿ

ಈ ರೀತಿ ತುಂಬಾ ಸುಲಭವಾಗಿ ನಿಮ್ಮ ಫೋನ್ ಪೇ ಮೂಲಕ ಇನ್ಸೂರೆನ್ಸ್ ಅನ್ನು ತೆಗೆದುಕೊಳ್ಳಬಹುದು ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು ಹಾಗೂ ಬೈಕ್ ಇನ್ಸೂರೆನ್ಸ್  ಮಾಡಿಸುವವರಿಗೆ ಈ ಲೇಖನವನ್ನು ಶೇರ್ ಮಾಡಿ & WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು 

 

Leave a Comment