Axis Bank personal loan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಆಕ್ಸಿಸ್ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ತೆಗೆದುಕೊಳ್ಳಲು ಬಯಸುತ್ತಿದ್ದೀರಾ ಹಾಗಾದ್ರೆ ಈ ಒಂದು ಲೇಖನ ಮೂಲಕ 10 ನಿಮಿಷದಲ್ಲಿ ಪರ್ಸನಲ್ ಲೋನ್ ಯಾವ ರೀತಿ ಆಕ್ಸಿಸ್ ಬ್ಯಾಂಕ್ ಮೂಲಕ ತೆಗೆದುಕೊಳ್ಳಬಹುದು ಹಾಗೂ ಆಕ್ಸಿಸ್ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ತೆಗೆದುಕೊಳ್ಳಲು ಬೇಕಾಗುವಂತ ದಾಖಲಾತಿಗಳು ಎಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ
ಫೋನ್ ಪೇ ಮೂಲಕ ಬೈಕ್ ಲೋನ್ ತೆಗೆದುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ
ತುಂಬಾ ಜನರು ಇತ್ತೀಚಿಗೆ ತಮ್ಮ ಸಂಸಾರದ ಅಡಚಣೆಗಾಗಿ ಹಾಗೂ ಇತರ ಕೆಲಸಗಳಿಗಾಗಿ ಪರ್ಸನಲ್ ಲೋನ್ ತೆಗೆದುಕೊಳ್ಳಲು ಜನರು ಮುಗಿ ಬೀಳುತ್ತಿದ್ದರೆ ಎಂದು ಹೇಳಬಹುದು ಹಾಗಾಗಿ ನಾವು ಈ ಲೇಖನಿಯಲ್ಲಿ ಆಕ್ಸಿಸ್ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ಯಾವ ರೀತಿ ತೆಗೆದುಕೊಳ್ಳುವುದು ಎಂಬ ಮಾಹಿತಿಯನ್ನು ನೀಡುತ್ತಿದ್ದೇವೆ. ಜೊತೆಗೆ ಇಂಟರೆಸ್ಟ್ ರೇಟ್ ಎಷ್ಟು ಸಿಗುತ್ತದೆ ಎಂಬ ಮಾಹಿತಿ ಕೂಡ ನಿಮಗೆ ಸಿಗುತ್ತದೆ
ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಜಮಾ ಆಗುತ್ತಿಲ್ಲವೇ ಹಾಗಾದರೆ ಈ ಎರಡು ಕೆಲಸ ಮಾಡಿ ಇಲ್ಲಿದೆ ಮಾಹಿತಿ
ಆಕ್ಸಿಸ್ ಬ್ಯಾಂಕ್ (Axis Bank personal loan)..?
ಸ್ನೇಹಿತರೆ ಇದೊಂದು ಪ್ರೈವೇಟ್ ಬ್ಯಾಂಕ್ ಸೆಕ್ಟರ್ ಆಗಿದ್ದು ಇದು ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಗ್ರಾಹಕರು ಹೊಂದಿರುವಂತ ಬ್ಯಾಂಕುಗಳಲ್ಲಿ ಒಂದು ಬ್ಯಾಂಕ್ ಹಾಗೂ ಅತಿ ಹೆಚ್ಚು ಜನರು ಈ ಬ್ಯಾಂಕ್ ಮೂಲಕ ಲೋನ್ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ ಜೊತೆಗೆ ಈ ಬ್ಯಾಂಕ್ ನಿಮಗೆ ಕೇವಲ 10 ನಿಮಿಷದಲ್ಲಿ ಅಥವಾ ಯಾವುದೇ ಆಧಾರವಿಲ್ಲದೆ ತುಂಬಾ ಸುಲಭವಾಗಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು
ಹೌದು ಸ್ನೇಹಿತರೆ ಇತ್ತೀಚಿಗೆ ಜನರು ಹಣಕ್ಕಾಗಿ ಬ್ಯಾಂಕುಗಳ ಮೂಲಕ ಪರ್ಸನಲ್ ಲೋನ್ ತೆಗೆದುಕೊಳ್ಳಲು ಆಸಕ್ತಿ ತೋರಿಸುತ್ತಿದ್ದಾರೆ ಏಕೆಂದರೆ ಹೊರಗಡೆ ಸಿಗುವಂತ ಬಡ್ಡಿ ದರ ಗಿಂತ ಈ ಬ್ಯಾಂಕ್ ಗಳ ಮೂಲಕ ಪರ್ಸನಲ್ ಲೋನ್ ಗೆ ಕಡಿಮೆ ಬಡ್ಡಿ ದರ ಸಿಗುತ್ತದೆ ಹಾಗಾಗಿ ನಾವು ಇವತ್ತು ಆಕ್ಸಿಸ್ ಬ್ಯಾಂಕ್ ನಲ್ಲಿ ಎಷ್ಟು ರೂಪಾಯಿವರೆಗೆ ಹಣ ಸಹಾಯವನ್ನು ವೈಯಕ್ತಿಕ ಸಾಲದ ರೂಪದಲ್ಲಿ ಅಥವಾ ಪರ್ಸನಲ್ ಲೋನ್ ರೂಪದಲ್ಲಿ ತೆಗೆದುಕೊಳ್ಳಬಹುದು ಎಂಬ ಮಾಹಿತಿಯನ್ನು ತಿಳಿಯೋಣ
ಆಕ್ಸಿಸ್ ಬ್ಯಾಂಕ್ ಪರ್ಸನಲ್ ಲೋನ್ ವಿವರಗಳು (Axis Bank personal loan)…?
ಸ್ನೇಹಿತರೆ ನೀವು ಆಕ್ಸಿಸ್ ಬ್ಯಾಂಕ್ ಗ್ರಾಹಕರು ಆಗಿದ್ದರೆ ಅಥವಾ ನೀವು ಆಕ್ಸಿಸ್ ಬ್ಯಾಂಕಿನ ಮೂಲಕ ಪರ್ಸನಲ್ ಲೋನ್ ತೆಗೆದುಕೊಳ್ಳಲು ಬಯಸಿದರೆ ನಿಮಗೆ ಹತ್ತು ಸಾವಿರ ರೂಪಾಯಿ ಯಿಂದ 40 ಸಾವಿರ ರೂಪಾಯಿವರೆಗೆ ಹಾಗೂ ಗರಿಷ್ಠ 40 ಲಕ್ಷ ರೂಪಾಯಿವರೆಗೆ ಸಾಲ ಪಡೆದುಕೊಳ್ಳಬಹುದು ಹಾಗಾಗಿ ಈ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲದ ಬಡ್ಡಿ ದರದ ವಿವರಗಳನ್ನು ಕೆಳಗಡೆ ನೀಡಲಾಗಿದೆ
ಸಾಲ ನೀಡುವ ಬ್ಯಾಂಕ್ :- ಆಕ್ಸಿಸ್ ಬ್ಯಾಂಕ್
ಸಾಲದ ಮೊತ್ತ:- 40 ಲಕ್ಷ ರೂಪಾಯಿವರೆಗೆ
ವಾರ್ಷಿಕ ಬಡ್ಡಿದರ:- ವರ್ಷಕ್ಕೆ 11.25% ರಿಂದ ಪ್ರಾರಂಭವಾಗುತ್ತದೆ
ಸಾಲ ಮರುಪಾವತಿ ಅವಧಿ:- 12 ತಿಂಗಳ ಗಳಿಂದ 84 ತಿಂಗಳವರೆಗೆ (7 ವರ್ಷಗಳವರೆಗೆ)
ಸಾಲ ಪಡೆಯುವ ವಿಧಾನ:- ಆನ್ಲೈನ್ ಮತ್ತು ಬ್ಯಾಂಕ್ ಮೂಲಕ
ಸಂಸ್ಕರಣಾ ಶುಲ್ಕ:- ಸಾಲದ ಮೊತ್ತದ ಮೇಲೆ 2% ವರೆಗೆ + GST
ಆಕ್ಸಿಸ್ ಬ್ಯಾಂಕ್ ವೈಯಕ್ತಿಕ ಸಾಲದ ಪ್ರಯೋಜನಗಳು (Axis Bank personal loan)..?
ಸ್ನೇಹಿತರೆ ನೀವು ಆಕ್ಸಿಸ್ ಬ್ಯಾಂಕ್ ನ ಮೂಲಕ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ತೆಗೆದುಕೊಳ್ಳಲು ಬಯಸಿದರೆ ನಿಮಗೆ ಈ ಸಾಲದ ಮೇಲೆ ಅನೇಕ ರೀತಿಯ ಪ್ರಯೋಜನಗಳು ದೊರೆಯುತ್ತವೆ. ಅದರ ಮಾಹಿತಿಯನ್ನು ಕೆಳಗಡೆ ವಿವರಿಸಲಾಗಿದೆ
1) ಯಾವುದೇ ಆಧಾರವಿಲ್ಲದೆ ಹಾಗೂ ಕಡಿಮೆ ಸಮಯದಲ್ಲಿ ಸಾಲ ದೊರೆಯುತ್ತದೆ
2) ಆಕ್ಸಿಸ್ ಬ್ಯಾಂಕ್ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲವನ್ನು ತುಂಬಾ ಸುಲಭವಾಗಿ ಮೊಬೈಲ್ ಮೂಲಕ ಅಥವಾ ಆನ್ಲೈನ್ ಮೂಲಕ ಪಡೆದುಕೊಳ್ಳಬಹುದು
3) ಸಾಲದ ಮರುಪಾವತಿಗಾಗಿ EMI ಪಾವತಿ ಮಾಡಲು ನಿಮಗೆ ಉತ್ತಮ ಸಮಯ ಸಿಗುತ್ತದೆ
4) ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರೆಯುತ್ತದೆ
ಆಕ್ಸಿಸ್ ಬ್ಯಾಂಕ್ ನಿಂದ ಪರ್ಸನಲ್ ಲೋನ್ ಪಡೆದುಕೊಳ್ಳುವುದು ಹೇಗೆ (Axis Bank personal loan)..?
ಸ್ನೇಹಿತರೆ ನೀವು ಎಕ್ಸಿಸ್ ಬ್ಯಾಂಕಿನ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸಿದರೆ ಹಾಗೂ ನಿಮ್ಮ ಮೊಬೈಲ್ ಮೂಲಕವೇ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸಿದರೆ ನೀವು ಮೊದಲು ಆಕ್ಸಿಸ್ ಬ್ಯಾಂಕ್ ಗ್ರಾಹಕರಾಗಿದ್ದರೆ ನಿಮಗೆ ಆಕ್ಸಿಸ್ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ಲಾಗಿನ್ ಮಾಡಿಕೊಳ್ಳಿ ಅಥವಾ ಆಕ್ಸಿಸ್ ಬ್ಯಾಂಕ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಪರ್ಸನಲ್ ಲೋನ್ ಗೆ ಅಪ್ಲೈ ಮಾಡಬಹುದು
1) ಮೊದಲು ನೀವು ಆಕ್ಸಿಸ್ ಬ್ಯಾಂಕ್ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ.
2) ನಂತರ ನಿಮಗೆ ಅಲ್ಲಿ ಮೆನು ಬಾರ್ ನಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
3) ನಂತರ ನೀವು ಅಲ್ಲಿ ನಿಮ್ಮ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಇರುವಂತಹ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಅಲ್ಲಿ ಪರ್ಸನಲ್ ಲೋನ್ ನೀಡಲು ಇತರ ದಾಖಲಾತಿಗಳು ಕೇಳುತ್ತವೆ
4) ಅಂದರೆ ಈ ಕೆವೈಸಿ ಪೂರ್ಣಗೊಳಿಸಲು ನಿಮ್ಮಿಂದ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಮತ್ತು ಇತರ ದಾಖಲಾತಿಗಳನ್ನು ನೀವು ಅಪ್ಲೋಡ್ ಮಾಡಬೇಕು
5) ಇದೆಲ್ಲ ಆದ ನಂತರ ನಿಮಗೆ ನಿಮ್ಮ ಸಿವಿಲ್ ಸ್ಕೋರ್ ಹಾಗೂ ಇತರ ಆಧಾರಗಳ ಮೇಲೆ ನಿಮಗೆ ಎಷ್ಟು ಬಡ್ಡಿ ಸಿಗುತ್ತದೆ ಎಂಬ ಮಾಹಿತಿ ನೀಡಲಾಗುತ್ತದೆ
6) ಇದೆಲ್ಲ ನೋಡಿಕೊಂಡು ನಂತರ ನೀವು ತುಂಬಾ ಸುಲಭವಾಗಿ ಪರ್ಸನಲ್ ಲೋನ್ ಗೆ ಅರ್ಜಿ ಹಾಕಬಹುದು
7) ಅರ್ಜಿ ಹಾಕಿದ ನಂತರ ನಿಮಗೆ ನಿಮ್ಮ ಎಲ್ಲಾ ದಾಖಲಾತಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ತಕ್ಷಣ ನಿಮಗೆ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ
ಬೇಕಾಗುವಂತ ದಾಖಲಾತಿಗಳು (Axis Bank personal loan)…?
ಸ್ನೇಹಿತರೆ ನೀವು ಆಫ್ಲೈನ್ ಮೂಲಕ ಅಂದರೆ ಬ್ಯಾಂಕಿಗೆ ಭೇಟಿ ನೀಡಿ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಬೇಕು ಅಂದುಕೊಂಡರೆ ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಂದುಕೊಂಡಿದ್ದರೆ ನೀವು ಈ ಕೆಳಗಡೆ ನೀಡಿದಂತಹ ಎಲ್ಲಾ ದಾಖಲಾತಿಗಳು ಹೊಂದಿರಬೇಕು
- ಅರ್ಜಿ ನಮೂನೆ
- ಇತ್ತೀಚಿನ ಫೋಟೋ
- ಕೆವೈಸಿ ದಾಖಲಾತಿಗಳು ( ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ನೆರೆಗ ಜಾಬ್ ಕಾರ್ಡ್ ಇವುಗಳಲ್ಲಿ ಯಾವುದಾದರೂ ಒಂದು)
- ಜನನದ ಪ್ರಮಾಣ ಪತ್ರ (ಆಧಾರ್ ಕಾರ್ಡ್/ ಪಾನ್ ಕಾರ್ಡ್/ ಜನನ ಪ್ರಮಾಣ ಪತ್ರ/ ಶಾಲಾ ಪ್ರಮಾಣ ಪತ್ರ/ ಇವುಗಳಲ್ಲಿ ಯಾವುದಾದರೂ ಒಂದು)
- ಆದಾಯ ಪುರಾವೆ:- ಇತ್ತೀಚೆಗೆ ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ನೀವು ಸ್ಯಾಲರಿ ಸ್ಲಿಪ್ ಮುಂತಾದವುಗಳನ್ನು ಆದಾಯ ಪುರವೇಯಾಗಿ ನೀಡಬಹುದು
ಸ್ನೇಹಿತರೆ ಈ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನೀವು ಎಕ್ಸಿಸ್ ಬ್ಯಾಂಕಿನ ಮೂಲಕ 40 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಜೊತೆಗೆ ಕಡಿಮೆ ಸಾಲ ಬೇಕಾದರೂ ಕೂಡ ಪಡೆದುಕೊಳ್ಳಬಹುದು ಹಾಗಾಗಿ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ನೀವು ಬ್ಯಾಂಕ್ ಸಾಕಿಗೆ ಭೇಟಿ ನೀಡಿ ಮತ್ತು ನೀವು ಸಾಲ ತೆಗೆದುಕೊಳ್ಳುವ ಮುನ್ನ ಸಾಲಕ್ಕೆ ಸಂಬಂಧಿಸಿದಂತೆ (terms and conditions ) ಸರಿಯಾಗಿ ಓದಿಕೊಳ್ಳಿ
ಇದೇ ರೀತಿ ಬ್ಯಾಂಕಿಂಗ್ ಸಂಬಂಧಿಸಿದಂತೆ ಹಾಗೂ ಪರ್ಸನಲ್ ಲೋನ್ ಮತ್ತು ಸರ್ಕಾರಿ ಯೋಜನೆಗಳು ಮತ್ತು ಸರಕಾರಿ ನೌಕರಿಗಳ ಕುರಿತು ಮಾಹಿತಿಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು