Udyogini Scheme : ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಸಾಲ | 1,50,000 ಸಾಲ ಮನ್ನಾ ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸಿ

Udyogini Scheme:– ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ನಿಮಗೆ ಮೂರು ಲಕ್ಷ ರೂಪಾಯಿ ಸಾಲ ಸಿಗುತ್ತದೆ ಜೊತೆಗೆ 1,50,000 ಸಾಲ ಮನ್ನಾ ಆಗುತ್ತೆ ಹಾಗಾಗಿ ಇದು ಯಾವ ಯೋಜನೆ ಮತ್ತು ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನು ಮತ್ತು ಈ ಯೋಜನೆಯಿಂದ ಆಗುವಂತ ಲಾಭವನ್ನು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಆದ್ದರಿಂದ ನೀವು ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು ಅಂದುಕೊಂಡರೆ ನೀವು ಈ ಲೇಖನಿಯನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ

ಮನೆ ಇಲ್ಲದವರಿಗೆ ಹಾಗೂ ಮನೆ ಕಟ್ಟಿಸಿಕೊಳ್ಳಬೇಕೆಂಬ ಆಸೆ ನಿಮಗಿದೆಯಾ ಹಾಗಾದ್ರೆ ಸರಕಾರ ಕಡೆಯಿಂದ ಬರುವಂತ ಈ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಮನೆ ಕಟ್ಟಿಸಿಕೊಳ್ಳಬಹುದು ಇಲ್ಲಿದೆ ಮಾಹಿತಿ

ಹೌದು ಸ್ನೇಹಿತರೆ ನಮ್ಮ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಮಹಿಳೆಯರ ಆರ್ಥಿಕ ಅಭಿವೃದ್ಧಿ ಮಾಡುವ ಉದ್ದೇಶದಿಂದ ಹಾಗೂ ಮಹಿಳೆಯರು ಹೆಚ್ಚು ಹೆಚ್ಚು ಉದ್ಯೋಗ ಮಾಡಲು ಮತ್ತು ಸ್ವಂತ ಉದ್ಯೋಗ ಮಾಡುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಾರೆ. ಅಂತ ಯೋಜನೆಗಳಲ್ಲಿ ಒಂದಾದಂತ ಉದ್ಯೋಗಿನಿ ಯೋಜನೆ ಈ ಯೋಜನೆಯ ಮೂಲಕ ಸ್ವಂತ ಉದ್ಯೋಗ ಮಾಡುವಂತಹ ಮಹಿಳೆಯರಿಗೆ ಸುಮಾರು 3 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುತ್ತದೆ

ಗೃಹಲಕ್ಷ್ಮಿಯರಿಗೆ ಈ ಜಿಲ್ಲೆಯಲ್ಲಿ ಇರುವಂತ ಜನರಿಗೆ ಒಟ್ಟಿಗೆ ನಾಲ್ಕು ಸಾವಿರ ಜಮಾ ಆಗುತ್ತಿದೆ ನಿಮ್ಮ ಖಾತೆಗೆ ಹಣ ಬಂದಿಲ್ಲ ಅಂದರೆ ಈ ನಾಲ್ಕು ಕೆಲಸ ಮಾಡಬೇಕು ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಉದ್ಯೋಗಿನಿ ಯೋಜನೆ ಎಂದರೆ ಮಹಿಳೆಯರಿಗೆ ಸ್ವಂತ ಉದ್ಯೋಗ ಮಾಡಲು ಹಾಗೂ ಸ್ವಂತ ಸಣ್ಣಪುಟ್ಟ ಕೈಗಾರಿಕೆಗಳ ಸ್ಥಾಪನೆಗಾಗಿ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಹಾಗೂ (Udyogini Scheme) ಮಹಿಳೆಯರು ನಮ್ಮ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಭಾಗವಹಿಸುವಂತೆ ಮಹಿಳೆಯರನ್ನು ಉತ್ತೇಜನ ನೀಡುವಂತ ಕರ್ನಾಟಕ ಸರ್ಕಾರ ಈ ಯೋಜನೆಯನ್ನು ಆರಂಭಿಸಿದೆ

ಹೌದು ಸ್ನೇಹಿತರೆ ನಿಮ್ಮ ಮನೆಯಲ್ಲಿ (Udyogini Scheme) ಮಹಿಳೆಯರಿದ್ದಾರೆ ಹಾಗಾದರೆ ಈ ಯೋಜನೆ ಮೂಲಕ ಅರ್ಜಿ ಸಲ್ಲಿಸಲು ತಿಳಿಸಿ ಏಕೆಂದರೆ ಈ ಯೋಜನೆ ಅಡಿಯಲ್ಲಿ ಸುಮಾರು 3 ಲಕ್ಷ ರೂಪಾಯಿವರೆಗೆ ಯಾವುದೇ ರೀತಿ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ ಹಾಗೂ ಈ ಯೋಜನೆ ಮೂಲಕ ಸಾಲ ಪಡೆದುಕೊಂಡಂತ ಮಹಿಳೆಯರಿಗೆ ಸಬ್ಸಿಡಿ ಹಣ ನೀಡಲಾಗುತ್ತದೆ ಅಂದರೆ ಸುಮಾರು ಅರ್ಧದಷ್ಟು ಹಣವನ್ನು ಸಾಲ ಮನ್ನಾ (Udyogini Scheme) ಮಾಡಲಾಗುತ್ತದೆ ಹಾಗಾಗಿ ಈ ಲೇಖನಿಯಲ್ಲಿ ಈ ಯೋಜನೆ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನು ತಿಳಿದುಕೊಳ್ಳೋಣ

ಗಂಡ ಮತ್ತು ಹೆಂಡತಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು ಇಬ್ಬರಿಗೆ 6000 ಹಣ ಸಿಗುತ್ತೆ. ಇಲ್ಲಿದೆ ಮಾಹಿತಿ

ಸ್ನೇಹಿತರೆ ಇದೇ ರೀತಿ ನಮ್ಮ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತರುವಂತ ವಿವಿಧ ರೀತಿ ಯೋಜನೆಗಳ ಬಗ್ಗೆ ಹಾಗೂ ಈ ಯೋಜನೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಮತ್ತು ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲಾತಿಗಳು ಏನು ಹಾಗೂ ಈ ಎಲ್ಲಾ ಯೋಜನೆಗಳಿಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ನಾವು ಪ್ರತಿದಿನ ನಮ್ಮ Pakkamahiti.com ನಲ್ಲಿ ಪ್ರಕಟಣೆ ಮಾಡುತ್ತೇವೆ

WhatsApp Group Join Now
Telegram Group Join Now       

ಇಷ್ಟೇ ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವಂತ ಸರಕಾರಿ ಹುದ್ದೆಗಳು ಹಾಗೂ ಈ ಹುದ್ದೆಗಳಿಗೆ ಯಾವಾಗ ನೇಮಕಾತಿ ಪ್ರಾರಂಭವಾಗುತ್ತದೆ ಹಾಗೂ ನೇಮಕಾತಿ ಪ್ರಾರಂಭವಾದ ನಂತರ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಎಂಬ ಸಂಪೂರ್ಣ ಮಾಹಿತಿಯನ್ನು ಪ್ರತಿದಿನ ಪ್ರಕಟಣೆ ಮಾಡುತ್ತೇವೆ ಜೊತೆಗೆ ನಮ್ಮ ಕರ್ನಾಟಕದಲ್ಲಿ ನಡೆಯುವಂತ ಪ್ರಮುಖ ಸುದ್ದಿಗಳು ಹಾಗೂ ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದಿರುವಂತ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಅಪ್ಡೇಟ್ ಮತ್ತು ನಮ್ಮ ರಾಜ್ಯದ ಪ್ರಚಲಿತ ಘಟನೆಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಯೋಜನೆಗಳು ಈ ರೀತಿ ಅನೇಕ ಮಾಹಿತಿಯನ್ನು ನೀವು ಪ್ರತಿದಿನ ಬೇಗ ಪಡೆದುಕೊಳ್ಳಬೇಕೆ WhatsApp Telegram ಗ್ರೂಪಿಗೆ ಜಾಯಿನ್ ಆಗಬೇಕಾಗುತ್ತದೆ ಇದರಿಂದ ಪ್ರತಿಯೊಂದು ಮಾಹಿತಿ ನಿಮಗೆ ಬೇಗ ಸಿಗುತ್ತೆ

 

ಉದ್ಯೋಗಿನಿ ಯೋಜನೆ (Udyogini Scheme)..?

ಹೌದು ಸ್ನೇಹಿತರೆ ಇದು ನಮ್ಮ ರಾಜ್ಯದಲ್ಲಿ ಇರುವಂತ ಬಡ ಮಹಿಳೆಯರು ಹಾಗೂ ಸ್ವಯಂ ಉದ್ಯೋಗ ಮಾಡಲು ಬಯಸುವಂತಹ ಮಹಿಳೆಯರಿಗಾಗಿ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಜಾರಿಗೆ ತಂದಿರುವಂತ ಒಂದು ವಿಶೇಷವಾದ ಯೋಜನೆಯಾಗಿದ್ದು ಈ ಮೂಲಕ ಸ್ವಾವಲಂಬನೆಯಾಗಿ ಜೀವನ ನಡೆಸಲು ಬಯಸುವಂತಹ ಹಾಗೂ ಹಿಂದುಳಿದ ವರ್ಗದವರು ಮತ್ತು ಬಡ ಮಹಿಳೆಯರು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಯಾವುದೇ ರೀತಿ ಬಡ್ಡಿ ಇಲ್ಲದೆ 3 ಲಕ್ಷ ರೂಪಾಯಿವರೆಗೆ ಸಾಲ ಪಡೆದುಕೊಳ್ಳಬಹುದು ಮತ್ತು ಈ ಸಾಲಕ್ಕೆ ಯಾವುದೇ ರೀತಿ ಬಡ್ಡಿ ಇರುವುದಿಲ್ಲ

Udyogini Scheme
Udyogini Scheme

 

ಹೌದು ಸ್ನೇಹಿತರೆ ಈ ಉದ್ಯೋಗಿನಿ ಯೋಜನೆಯ ಮೂಲಕ ಮಹಿಳೆಯರಿಗೆ ನೀಡಲಾದಂತ ಮೂರು ಲಕ್ಷ ರೂಪಾಯಿ ಹಣಕ್ಕೆ ಯಾವುದೇ ರೀತಿ ಬಡ್ಡಿ ಇರುವುದಿಲ್ಲ ಹಾಗೂ ಇದರಲ್ಲಿ ಸಾಮಾನ್ಯ ವರ್ಗದ ಮಹಿಳೆಯರಿಗೆ 30% ರಷ್ಟು ಸಬ್ಸಿಡಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಸುಮಾರು 50% ರಷ್ಟು ಸಬ್ಸಿಡಿ ಸಿಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂಬ ಉದ್ದೇಶ ನಮ್ಮದು

 

ಉದ್ಯೋಗಿನಿ ಯೋಜನೆಯ (Udyogini Scheme) ಪ್ರಯೋಜನಗಳು ಏನು..?

3 ಲಕ್ಷ ರೂಪಾಯಿವರೆಗೆ ಸಾಲ:- ಹೌದು ಸ್ನೇಹಿತರೆ ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಸಾಮಾನ್ಯ ವರ್ಗದ ಮಹಿಳೆಯರು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರು ಮತ್ತು ಹಿಂದುಳಿದ ವರ್ಗದ ಮಹಿಳೆಯರು ಹಾಗೂ ಇತರ ಮಹಿಳೆಯರು ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವುದರ ಮೂಲಕ 3,00,000 ವರೆಗೆ ಯಾವುದೇ ರೀತಿ ಬಡ್ಡಿ ಇಲ್ಲದೆ ಸಾಲ ಪಡೆದುಕೊಳ್ಳಬಹುದು ಆದ್ದರಿಂದ ಈ ಯೋಜನೆ ಮಹಿಳೆಯರಿಗೆ ಒಂದು ವಿಶೇಷವಾದ ಯೋಜನೆ ಎಂದು ಹೇಳಬಹುದು

Udyogini Scheme
Udyogini Scheme

 

ಶೇಕಡ 30ರಷ್ಟು ಸಾಲ ಮನ್ನಾ:- ಹೌದು ಸ್ನೇಹಿತರೆ, ಸಾಮಾನ್ಯ ವರ್ಗದ ಮಹಿಳೆಯರು ಈ ಉದ್ಯೋಗಿನಿ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿ ಯಾವುದೇ ರೀತಿ ಬಡ್ಡಿ ಇಲ್ಲದೆ 3 ಲಕ್ಷ ರೂಪಾಯಿ ವರೆಗೆ ಸಾಲ ಪಡೆದುಕೊಂಡರೆ ಅಂತ ಮಹಿಳೆಯರಿಗೆ ಶೇಕಡ 30ರಷ್ಟು ಅಂದರೆ ಸುಮಾರು 90 ಸಾವಿರ ರೂಪಾಯಿವರೆಗೆ ಸಾಲ ಮನ್ನಾ ಅಥವಾ ಸಬ್ಸಿಡಿ ಹಣ ಸಿಗುತ್ತದೆ

ಶೇಕಡ 50ರಷ್ಟು ಸಾಲ ಮನ್ನಾ:- ಹೌದು ಸ್ನೇಹಿತರೆ ಈ ಉದ್ಯೋಗಿನಿ ಯೋಜನೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರು ಅರ್ಜಿ ಸಲ್ಲಿಸಿ ಯಾವುದೇ ರೀತಿ ಬಡ್ಡಿ ಇಲ್ಲದೆ ಮೂರು ಲಕ್ಷ ರೂಪಾಯಿವರೆಗೆ ಸಾಲ ಪಡೆದುಕೊಂಡರೆ ಅಂತ ಮಹಿಳೆಯರಿಗೆ ಶೇಕಡ 50ರಷ್ಟು ಅಂದರೆ ಸುಮಾರು 1,50,000 ವರೆಗಿನ ಸಾಲ ಮನ್ನಾ ಮಾಡುವಂತ ಸಾಧ್ಯತೆ ಇದೆ ಹಾಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರು ಆದಷ್ಟು ಈ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಿ

Udyogini Scheme
Udyogini Scheme

 

ಹೌದು ಸ್ನೇಹಿತರೆ ಈ ಉದ್ಯೋಗಿನಿ ಯೋಜನೆಗೆ ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಹಾಗಾಗಿ ಈ ಯೋಜನೆಗೆ ಮಹಿಳೆಯರು ಅರ್ಜಿ ಸಲ್ಲಿಸಿ ಸ್ವಂತ ಉದ್ಯೋಗಕ್ಕಾಗಿ ಅಥವಾ ಘಟಕದ ವೆಚ್ಚ ಸುಮಾರು ಒಂದು ಲಕ್ಷ ರೂಪಾಯಿ ವರೆಗೆ ಸಾಲ ಸಿಗುತ್ತದೆ ಗರಿಷ್ಠ ಅಂದರೆ ಈ ಯೋಜನೆ ಅಡಿಯಲ್ಲಿ ಸುಮಾರು ಮೂರು ಲಕ್ಷ ರೂಪಾಯಿವರೆಗೆ ಸಾಲ ಪಡೆದುಕೊಳ್ಳಬಹುದು

 

ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರುವಂತ ಅರ್ಹತೆಗಳು;(Udyogini Scheme)..?

ಮಹಿಳೆಯರಿಗೆ ಮಾತ್ರ ಅವಕಾಶ:- ಹೌದು ಸ್ನೇಹಿತರೆ ಈ ಉದ್ಯೋಗಿನಿ ಯೋಜನೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಹಾಗಾಗಿ ಸ್ವಂತ ಉದ್ಯೋಗ ಮಾಡಲು ಬಯಸುವಂತಹ ಮಹಿಳೆಯರು ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಿ ಯಾವುದೇ ರೀತಿ ಬಡ್ಡಿ ಇಲ್ಲದೆ 3 ಲಕ್ಷ ರೂಪಾಯಿವರೆಗೆ ಸಾಲ ಪಡೆದುಕೊಳ್ಳಬಹುದು

ಅರ್ಜಿದಾರ ವಾರ್ಷಿಕ ಆದಾಯ:- ಸ್ನೇಹಿತರೆ ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯರು ಅಥವಾ ಮಹಿಳೆಯ ಕುಟುಂಬದವರು ಗಳಿಸುವಂತಹ ವಾರ್ಷಿಕವಾಗಿ 1,56,000 ಗಿಂತ ಆದಾಯ ಒಳಗಡೆ ಇರಬೇಕು

ಅರ್ಜಿದಾರರ ವಯೋಮಿತಿ:- ಹೌದು ಸ್ನೇಹಿತರೆ ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಅಥವಾ ಮಹಿಳೆಯ ವಯಸ್ಸು 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ ಅಂದರೆ ಸುಮಾರು 55 ವರ್ಷದ ಒಳಗಿನ ಮಹಿಳೆಯರು ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಬಹುದು

ಖಾಯಂ ನಿವಾಸಿ:- ಹೌದು ಸ್ನೇಹಿತರೆ ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯರು ನಮ್ಮ ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು ಅಂದರೆ ಮಾತ್ರ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ

ಸ್ವಯಂ ಉದ್ಯೋಗ ಸಾಲ:- ಸ್ನೇಹಿತರೆ ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆ ಈ ಹಿಂದೆ ನಮ್ಮ ರಾಜ್ಯ ಸರ್ಕಾರ (Udyogini Scheme) ಕಡೆಯಿಂದಾಗಲಿ ಅಥವಾ ಕೇಂದ್ರ ಸರ್ಕಾರ ಕಡೆಯಿಂದಾಗಲಿ (Udyogini Scheme) ಸ್ವಂತ ಉದ್ಯೋಗ ಮಾಡಲು ಯಾವುದೇ ರೀತಿ ಸಾಲ ಪಡೆದುಕೊಂಡಿರಬಾರದು

Udyogini Scheme
Udyogini Scheme

 

ಇಂಥಹ ಮಹಿಳೆಯರಿಗೆ ಹೆಚ್ಚಿನ ಆದ್ಯತೆ (Udyogini Scheme)..?

ಬಡವರಿಗೆ:- ಹೌದು ಸ್ನೇಹಿತರೆ, ಈ ಉದ್ಯೋಗಿನಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯರು ಬಡವರು ಹಾಗೂ ನಿರ್ಗತಿಗರು ಅರ್ಜಿ ಸಲ್ಲಿಸಿದರೆ ಅಂತವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ

ವಿಧವೆ ಮಹಿಳೆಯರು:- ಈ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವಂತಹ ಮಹಿಳೆಯರಲ್ಲಿ ವಿಧವೆ ಮಹಿಳೆಯರು ಹಾಗೂ ಒಂಟಿ ಮಹಿಳೆಯರು ಮತ್ತು ಮನೆಯಲ್ಲಿ ದುಡಿದು ಹಾಕಲು ಯಾವುದೇ ಪುರುಷ ಇರದ ಅಂತ ಮಹಿಳೆಯರಿಗೆ ಈ ಯೋಜನೆ ಅಡಿಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ

ST & SC ಮಹಿಳೆಯರು:- ಹೌದು ಸ್ನೇಹಿತರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರು ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಅಂತ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ

ಕೌಶಲ್ಯ ತರಬೇತಿ:- ಹೌದು ಸ್ನೇಹಿತರೆ ನಮ್ಮ ಕರ್ನಾಟಕದ KSWDC ಇಲಾಖೆ ಅಥವಾ ಇತರ ಯಾವುದೇ ಇಲಾಖೆಯಿಂದ ವೃತ್ತಿಪರ ತರಬೇತಿ ಅಥವಾ ಕೌಶಲ್ಯ ತರಬೇತಿ ಪಡೆದಿರುವಂತ ಮಹಿಳೆಯರಿಗೆ ಈ ಯೋಜನೆ ಅಡಿಯಲ್ಲಿ ಸಾಲ ನೀಡಲು ಹೆಚ್ಚಿನ ಆದ್ಯತೆ ನೀಡಲಾಗುತ್ತದೆ

 

ಸಂಘ ಸಂಸ್ಥೆಗಳು:- ಹೌದು ಸ್ನೇಹಿತರೆ ಈ ಉದ್ಯೋಗಿನಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯರು ಯಾವುದೇ ರೀತಿ ವಿಶ್ವ ಬ್ಯಾಂಕ್ ನೆರವಿನಿಂದ ನಡೆಯುತ್ತಿರುವಂತ ಶ್ವಾಸಕ್ತಿ ಸಂಘಗಳು ಹಾಗೂ ಶ್ರೀ ಶಕ್ತಿ ಸಂಘಗಳು ಮತ್ತು ಇತರ ಯಾವುದೇ ರೀತಿ ಸಂಘ ಸಂಸ್ಥೆಗಳು ಹಾಗೂ ಗುಂಪುಗಳಲ್ಲಿ ಇರುವಂತ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಮತ್ತು ಈ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಶೇಕಡ 10 ರಷ್ಟು ಮೀಸಲಾತಿ ನೀಡಲಾಗುತ್ತದೆ

 

ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ (Udyogini Scheme) ದಾಖಲಾತಿಗಳು..?

ರೇಷನ್ ಕಾರ್ಡ್:- ಹೌದು ಸ್ನೇಹಿತರೆ ಈ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಮಹಿಳೆಯರು ಮೂರು ಲಕ್ಷ ರೂಪಾಯಿ ಸಾಲ ಪಡೆದುಕೊಳ್ಳಬೇಕು ಅಂದರೆ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ರೇಷನ್ ಕಾರ್ಡ್ ಪಡೆದಿರಬೇಕು ಏಕೆಂದರೆ ಈ ಯೋಜನೆ ಬಡತನ ರೇಖೆಗಿಂತ ಕೆಳಗಿರುವವರಿಗೆ ಜಾರಿಗೆ ತರಲಾಗಿದ್ದು ಹಾಗಾಗಿ ನಮ್ಮ ರಾಜ್ಯದಲ್ಲಿ ಇರುವಂತ ಬಿಪಿಎಲ್ ಮತ್ತು ಅಂಥೋದಯ ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳು ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಬಹುದು

ಆಧಾರ್ ಕಾರ್ಡ್:- ಸ್ನೇಹಿತರೆ ಇನ್ನೊಂದು ಮುಖ್ಯ ದಾಖಲಾತಿಯೆಂದರೆ ಅದು ಆಧಾರ್ ಕಾರ್ಡ್ ಏಕೆಂದರೆ ನಮ್ಮ ಭಾರತ ದೇಶದಲ್ಲಿ ವಾಸ ಮಾಡುವಂಥ ಪ್ರತಿಯೊಬ್ಬ ಪ್ರಜೆನು ನಮ್ಮ ದೇಶದ ಪ್ರಜೆ ಎಂದು ಗುರುತಿಸಲು ಆಧಾರ್ ಕಾರ್ಡ್ ಪ್ರಮುಖ ಮಾನದಂಡವಾಗಿ ಬಳಸಲಾಗುತ್ತದೆ ಅಷ್ಟೇ ಅಲ್ಲದೆ ಆಧಾರ್ ಕಾರ್ಡ್ ನಲ್ಲಿ ವ್ಯಕ್ತಿಯ ಸಂಪೂರ್ಣ ಮತ್ತು ನಿಖರ ಮಾಹಿತಿಯನ್ನು ಹೊಂದಿರುತ್ತದೆ ಹಾಗಾಗಿ ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ನೀಡಬೇಕು

ಬ್ಯಾಂಕ್ ಪಾಸ್ ಬುಕ್:- ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರ ಮಹಿಳೆಯರು ತಮಗೆ ಸಂಬಂಧಿಸಿದ ಬ್ಯಾಂಕ್ ಖಾತೆಯ ವಿವರ ನೀಡಬೇಕಾಗುತ್ತದೆ ಏಕೆಂದರೆ ಈ ಯೋಜನೆಯಲ್ಲಿ ನೀಡುವಂತ ಮೂರು ಲಕ್ಷ ರೂಪಾಯಿ ಸಾಲವನ್ನು ನೇರವಾಗಿ ಅರ್ಜಿದಾರರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಆದ್ದರಿಂದ ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಯ ಸಂಪೂರ್ಣ ವಿವರವನ್ನು ನೀಡಬೇಕು

ಜಾತಿ ಮತ್ತು ಆದಾಯ ಪ್ರಮಾಣ ಪತ್ರ:- ಹೌದು ಸ್ನೇಹಿತರೆ ಈ ಯೋಜನೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಅಥವಾ ಇತರ ಯಾವುದೇ ವರ್ಗಕ್ಕೆ ಸೇರಿದಂತ ಮಹಿಳೆಯರು ಅರ್ಜಿ ಸಲ್ಲಿಸಲು ಬಯಸಿದರೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಈ ಯೋಜನೆಯಲ್ಲಿ ಹೆಚ್ಚಿನ ಆದ್ಯತೆ ನೀಡುವುದರಿಂದ ಕಡ್ಡಾಯವಾಗಿ ಅರ್ಜಿದಾರರು ತಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡಬೇಕು

ವಿಶೇಷ ಪ್ರಮಾಣ ಪತ್ರ:- ಹೌದು ಸ್ನೇಹಿತರೆ ಈ ಯೋಜನೆ ಅಡಿಯಲ್ಲಿ ಅಂಗವಿಕಲರು ಮತ್ತು ವಿಧವೆಯರು ಹಾಗೂ ವಿಶೇಷ ವರ್ಗದ ಮಹಿಳೆಯರು ಈ ಉದ್ಯೋಗಿನಿ ಯೋಜನೆಯ ಮೂಲಕ ಅರ್ಜಿ ಸಲ್ಲಿಸಲು ಬಯಸಿದರೆ ತಮಗೆ ಸಂಬಂಧಿಸಿದ ಅಂದರೆ ಅಂಗವಿಕಲ ಪ್ರಮಾಣ ಪತ್ರ ಅಥವಾ ವಿಧವಾ ಪ್ರಮಾಣ ಪತ್ರ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ನೀಡಬೇಕಾಗುತ್ತದೆ ಏಕೆಂದರೆ ಈ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಇಂತವರಿಗೆ ಜಾಸ್ತಿ ಆದ್ಯತೆ ನೀಡಲಾಗುತ್ತದೆ

 

ಶಾಲಾ ವರ್ಗಾವಣೆ ಪ್ರಮಾಣ ಪತ್ರ:- ಹೌದು ಸ್ನೇಹಿತರೆ ಈ ಉದ್ಯೋಗಿನಿ ಯೋಜನೆಯ ಮೂಲಕ ಸ್ವಂತ ಉದ್ಯೋಗ ಮಾಡಲು ಬಯಸುವಂತಹ ಮಹಿಳೆಯು ಹತ್ತನೇ ತರಗತಿ ಪಾಸ್ ಆಗಿದ್ದರೆ ಅಥವಾ 7ನೇ ತರಗತಿ ಪಾಸ್ ಆಗಿದ್ದರೆ ಅಂತಹ ಸಂದರ್ಭದಲ್ಲಿ ತಮ್ಮ ಶಾಲೆಗೆ ಸಂಬಂಧಿಸಿದ ವರ್ಗಾವಣೆ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ

ಇತರ ದಾಖಲಾತಿಗಳು:- ಹೌದು ಸ್ನೇಹಿತರೆ ಈ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಈ ತರ ದಾಖಲಾತಿಗಳು ಅಂದರೆ ತಾವು ಯಾವ ಉದ್ಯೋಗ ಮಾಡುತ್ತೀರಿ ಹಾಗೂ ಈ ಉದ್ಯೋಗವನ್ನು ಯಾವ ರೀತಿ ಮಾಡುತ್ತಿರಿ ಎಂಬ ಸಂಬಂಧ ಪಟ್ಟಂತೆ ಒಂದು ದಾಖಲಾತಿ ವಿವರ ನೀಡಬೇಕಾಗುತ್ತದೆ

 

ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ (Udyogini Scheme)..?

ಸ್ನೇಹಿತರೆ ತುಂಬಾ ಮಹಿಳೆಯರು ಈ ಉದ್ಯೋಗಿನಿ ಯೋಜನೆಯ ಬಗ್ಗೆ ಮಾಹಿತಿ ಗೊತ್ತಿರುವುದಿಲ್ಲ ಹಾಗಾಗಿ ಈ ಲೇಖನಿಯಲ್ಲಿ ನಿಮಗೆ ಉದ್ಯೋಗಿನಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕಿದೆ ಅಂದುಕೊಂಡಿದ್ದೇನೆ. ಮತ್ತು ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಪ್ರತಿ ವರ್ಷ ಡಿಸೆಂಬರ್ ಮತ್ತು ನವೆಂಬರ್ ತಿಂಗಳಗಳಲ್ಲಿ ಅರ್ಜಿ ಕರೆಯಲಾಗುತ್ತದೆ ಹಾಗಾಗಿ ಆಸಕ್ತಿ ಉಳ್ಳಂತ ಮಹಿಳೆಯರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಹಾಗಾಗಿ ಅರ್ಜಿ ಸಲ್ಲಿಸಲು ಬಿಟ್ಟ ದಿನ ನಾವು ನಿಮಗೆ ಮತ್ತೊಂದು ಲೇಖನಿಯ ಮೂಲಕ ಮಾಹಿತಿ ನೀಡುತ್ತೇವೆ ಜೊತೆಗೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಕರ್ನಾಟಕ ಸೇವಾ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

ವಿಶೇಷ ಸೂಚನೆ:- ಸ್ನೇಹಿತರೆ ನೀವು ಉದ್ಯೋಗಿನಿ ಯೋಜನೆಗೆ ಸಂಬಂಧಪಟ್ಟಂತೆ ಹಾಗೂ ಈ ಉದ್ಯೋಗಿನಿ ಯೋಜನೆಯಲ್ಲಿ ಯಾವ ರೀತಿ ಸಾಲ ನೀಡಲಾಗುತ್ತದೆ ಎಂಬ ಮಾಹಿತಿಗಾಗಿ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು ಅಥವಾ ನಿಮ್ಮ ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾ ಉಪ ನಿರ್ದೇಶಕರು ಅಥವಾ ನಿಮ್ಮ ಜಿಲ್ಲೆಯಲ್ಲಿರುವಂತ ಅಥವಾ ನಿಮ್ಮ ತಾಲೂಕುಗಳಲ್ಲಿ ಇರುವಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಉದ್ಯೋಗಿನಿ ಯೋಜನೆ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು

Leave a Comment