free sewing machine: ಉಚಿತ ಹೊಲಿಗೆ ಯಂತ್ರ ವಿತರಣೆ ಬೇಗ ಅರ್ಜಿ ಸಲ್ಲಿಸಿ..! ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಕಡ್ಡಾಯ

free sewing machine:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಉಚಿತ ಹೂಲಿಗೆ ಯಂತ್ರ ಪಡೆದುಕೊಳ್ಳಬೇಕು ಅಂದುಕೊಂಡಿದ್ದೀರಾ ಹಾಗಾದರೆ ನಿಮಗೆ ಸುವರ್ಣ ಅವಕಾಶ ನೀವೇನಾದ್ರೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಉಚಿತ ಹೂಲಿಗೆ ಯಂತ್ರವನ್ನು (free sewing machine) ಪಡೆದುಕೊಳ್ಳಬಹುದು ಈ ಲೇಖನಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲಾತಿಗಳು ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

ಜೂನ್ ಮತ್ತು ಜುಲೈ ತಿಂಗಳ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಬಿಡುಗಡೆಗಾಗಿ ಹೊಸ ರೂಲ್ಸ್ ಜಾರಿ ಎಲ್ಲಿದೆ ಮಾಹಿತಿ

ಹೌದು ಸ್ನೇಹಿತರೆ, ತುಂಬಾ ಮಹಿಳೆಯರು ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಬೇಕು (free sewing machine) ಅಂದುಕೊಳ್ಳುತ್ತಾರೆ ಹಾಗೂ ತುಂಬಾ ಜನರು ಕೂಡ ಟೈಲರಿಂಗ್ ಅಂಗಡಿ ಇಡಬೇಕೆಂಬ ಆಸೆ ಇರುತ್ತದೆ ಅಂತವರಿಗೆ ಸುವರ್ಣ ಅವಕಾಶ ಏಕೆಂದರೆ ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಹಣ ಸಹಾಯವನ್ನು ಪಡೆದುಕೊಳ್ಳಬಹುದು ಜೊತೆಗೆ ನಿಮ್ಮ (free sewing machine) ಉದ್ಯೋಗವನ್ನು ಅಂದರೆ ನೀವು ಟೈಲರಿಂಗ್ ಮಾಡುತ್ತಿದ್ದರೆ ಅಥವಾ ಇತರ ಯಾವುದೇ ಸಣ್ಣಪುಟ್ಟ ಉದ್ಯೋಗ ಮಾಡುತ್ತಿದ್ದರೆ ಈ ಯೋಜನೆಯ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಗಳ ಮೂಲಕ ಸಾಲ ಪಡೆದುಕೊಳ್ಳಬಹುದು ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನ ಪೂರ್ತಿಯಾಗಿ ಓದಿ

ಮೂರನೇ ಕಂತಿನ ಬರ ಪರಿಹಾರ ಹಣ ಈ ಜಿಲ್ಲೆಯಲ್ಲಿರುವವರಿಗೆ ಬಿಡುಗಡೆ. ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ರೀತಿ ಯೋಜನೆಗಳನ್ನು ಜಾರಿಗೆ ತರುತ್ತಾರೆ. ಮತ್ತು ತುಂಬಾ ಜನರಿಗೆ ಈ ಯೋಜನೆಯ ಬಗ್ಗೆ ಮಾಹಿತಿನೇ ಗೊತ್ತಿರುವುದಿಲ್ಲ ಹಾಗಾಗಿ ನೀವು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ರೀತಿ ಯೋಜನೆಗಳ ಬಗ್ಗೆ ಹಾಗೂ ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ಬೇಗ ಪಡೆದುಕೊಳ್ಳಬೇಕೆ ಹಾಗಾದರೆ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು ಇದರಿಂದ ನಿಮಗೆ ನಮ್ಮ ರಾಜ್ಯದ ಪ್ರಮುಖ ಸುದ್ದಿಗಳು ಸರ್ಕಾರಿ ಯೋಜನೆಗಳು ಹಾಗೂ ಸರಕಾರಿ ನೌಕರಿ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಸಿಗುತ್ತದೆ

ಈ ಒಂದು ಕಾರ್ಡ್ ಮಾಡಿಸಿದರೆ ಸಾಕು ನಿಮಗೆ ಪ್ರತಿ ತಿಂಗಳು 3000 ಹಣ ಬರುತ್ತೆ ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಬೇಕು ಇಲ್ಲಿದೆ ಮಾಹಿತಿ

ಇಷ್ಟೇ ಅಲ್ಲದೆ ನಮ್ಮ ಕರ್ನಾಟಕ ರಾಜ್ಯದಲ್ಲಿ ನಡೆಯುವಂತ ಪ್ರಮುಖ ಸುದ್ದಿಗಳು ಹಾಗೂ ನಮ್ಮ ಕರ್ನಾಟಕ ರಾಜ್ಯದಲ್ಲಿ ಜಾರಿ ಇರುವಂತಹ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ನಾವು ದಿನಾಲು ಲೇಖನಿಯ ಮೂಲಕ ಪ್ರಕಟಣೆ ಮಾಡುತ್ತೇವೆ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮತ್ತು ಮಹಿಳೆಯರಿಗೆ ಸಂಬಂಧಿಸಿದಂತೆ ಸರಕಾರಿ ಯೋಜನೆಗಳ ಬಗ್ಗೆ ಹಾಗೂ ಪ್ರಚಲಿತ ವಿದ್ಯಮಾನಗಳು ಮತ್ತು ನಮ್ಮ ಕರ್ನಾಟಕದ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಪ್ರತಿಯೊಂದು ಮಾಹಿತಿ ಪಡೆದುಕೊಳ್ಳಲು ನೀವು ನಮ್ಮ WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

 

WhatsApp Group Join Now
Telegram Group Join Now       

ಉಚಿತ ಹೊಲಿಗೆ ಯಂತ್ರ (free sewing machine).?

ಹೌದು ಸ್ನೇಹಿತರೆ, ಮಹಿಳೆಯರನ್ನು ಆರ್ಥಿಕವಾಗಿ ಸದೃಢ ಮಾಡಲು ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರ ವಿವಿಧ ರೀತಿ ಯೋಜನೆಗಳನ್ನು ಜಾರಿಗೆ ತಂದಿದೆ ಅದರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಒಂದು ವಿಶೇಷವಾದ ಯೋಜನೆ ಎಂದರೆ ಅದು ಪಿಎಂ ವಿಶ್ವಕರ್ಮ ಯೋಜನೆ..!

free sewing machine
free sewing machine

 

ಹೌದು ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆಯ ಮೂಲಕ ನೀವು ತುಂಬಾ ಸುಲಭವಾಗಿ ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು ಜೊತೆಗೆ 3 ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬಹುದು ಈ ಯೋಜನೆಯ ಬಗ್ಗೆ ಹಾಗೂ ಈ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವುದರಿಂದ ಏನೆಲ್ಲಾ ಲಾಭಗಳು ಸಿಗುತ್ತವೆ ಎಂಬ ಮಾಹಿತಿಯನ್ನು ನಾವು ಕೆಳಭಾಗದಲ್ಲಿ ವಿವರಿಸಿದ್ದೇವೆ

 

ಪಿಎಂ ವಿಶ್ವಕರ್ಮ ಯೋಜನೆ (free sewing machine).?

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಒಂದು ವಿಶೇಷವಾದ (free sewing machine) ಯೋಜನೆಯಾಗಿದೆ ಈ ಯೋಜನೆ ಮೂಲಕ ವಂಶ ಪಾರಂಪರಿಕವಾಗಿ ವೃತ್ತಿಯನ್ನು ಮಾಡುತ್ತಿರುವ ಜನರಿಗೆ ಹಾಗೂ ಇತರ ಸಣ್ಣಪುಟ್ಟ ಕಾರ್ಖಾನೆಗಳ ಕೆಲಸ ಮಾಡುತ್ತಿರುವ ಜನರು ಮತ್ತು ಕೂಲಿ ಕಾರ್ಮಿಕರು ಹಾಗೂ ಗುಡಿ ಕೈಗಾರಿಕೆ ಮಾಡುತ್ತಿರುವ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಿ ತಮ್ಮ ವೃತ್ತಿಗೆ ಸಂಬಂಧಿಸಿದಂತ ಯಂತ್ರೋಪಕರಣಗಳ ಖರೀದಿಗಾಗಿ 15000 ಹಣ ಪಡೆಯುವುದಲ್ಲದೆ ಕಡಿಮೆ ಬಡ್ಡಿ ದರದಲ್ಲಿ ಮೂರು ಲಕ್ಷ ರೂಪಾಯಿವರೆಗೆ ಸಾಲ ಪಡೆದುಕೊಳ್ಳಬಹುದು ಅದರ ಸಂಪೂರ್ಣ ಮಾಹಿತಿಯನ್ನು ನಾವು ಕೆಳಗಡೆ ವಿವರಿಸಿದ್ದೇವೆ

free sewing machine
free sewing machine

 

ಉಚಿತ ಹೊಲಿಗೆ ಯಂತ್ರ ಪಡೆಯುವುದು ಹೇಗೆ (free sewing machine)..?

ಹೌದು ಸ್ನೇಹಿತರೆ ನೀವೇನಾದರೂ ಟೈಲರಿಂಗ್ ಮಾಡ್ತಾ ಇದ್ದೀರಾ ಅಥವಾ ನೀವು ಟೈಲರಿಂಗ್ ಮಷೀನ್ ಅಥವಾ ಹೊಲಿಗೆ ಯಂತ್ರ ತೆಗೆದುಕೊಳ್ಳಬೇಕು ಹಾಗಾದರೆ ನೀವು ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸಿದ ನಂತರ ನಿಮಗೆ ಟೂಲ್ ಕಿಟ್ ಖರೀದಿಗಾಗಿ 15000 ಹಣವನ್ನು ನೀಡಲಾಗುತ್ತದೆ ಈ ಹಣವು ಸಂಪೂರ್ಣವಾಗಿ ಉಚಿತವಾಗಿದ್ದು ಹಾಗೂ ಈ ಹಣವನ್ನು ಯಾವುದೇ ಬ್ಯಾಂಕಿಗೆ ಹಿಂದಿರುಗಿಸುವಂತಿಲ್ಲ ಹಾಗಾಗಿ ಈ ಹಣದಲ್ಲಿ ನೀವು ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ರೀತಿ ಆಧುನಿಕ ಯಂತ್ರ ಅಥವಾ ಹೋಲಿಗೆ ಯಂತ್ರವನ್ನು ತುಂಬಾ ಸುಲಭವಾಗಿ ತೆಗೆದುಕೊಳ್ಳಬಹುದು

free sewing machine
free sewing machine

 

ಹಾಗಾಗಿ ಈ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವುದರಿಂದ ಆಗುವಂಥ ಲಾಭಗಳೇನು ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ನಾವು ಸಂಪೂರ್ಣವಾಗಿ ಕೆಳಭಾಗದಲ್ಲಿ ವಿವರಿಸಿದ್ದೇವೆ

 

ಪಿಎಂ ವಿಶ್ವಕರ್ಮ ಯೋಜನೆಗೆ (free sewing machine) ಲಾಭಗಳೇನು..?

ಉಚಿತ 15,000 ಹಣ:– ಹೌದು ಸ್ನೇಹಿತರೆ ನೀವು ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದರೆ ಅಥವಾ ಫಲಾನುಭವಿಗಳಾದರೆ ನಿಮಗೆ ಈ ಯೋಜನೆಯ ಮೂಲಕ 15,000 ಹಣವನ್ನು ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಅಥವಾ ಯಾವುದೇ ರೀತಿ ಯಂತ್ರಗಳ ಖರೀದಿಗಾಗಿ ನಿಮ್ಮ ಬ್ಯಾಂಕ್ ಖಾತೆಗೆ 15,000 ಹಣವನ್ನು ಉಚಿತವಾಗಿ ನೀಡಲಾಗುತ್ತದೆ ಈ ಹಣದಿಂದ ನೀವು ಹೊಲಿಗೆ ಯಂತ್ರವನ್ನು ಖರೀದಿ ಮಾಡಬಹುದು ಅಥವಾ ಈ ಹಣವನ್ನು ಸಂಪೂರ್ಣವಾಗಿ ನಿಮ್ಮ ಉದ್ಯೋಗಕ್ಕಾಗಿ ಬಳಸಿಕೊಳ್ಳಬಹುದು ಹಾಗಾಗಿ ಪ್ರತಿಯೊಬ್ಬರೂ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಿ

ಕೌಶಲ್ಯ ತರಬೇತಿ:- ಹೌದು ಸ್ನೇಹಿತರೆ ಈ ಯೋಜನೆಗೆ ಅರ್ಜಿ ಸಲ್ಲಿಸುವುದರಿಂದ ನೀವು ನಿಮ್ಮ ವಂಶ ಪಾರಂಪರಿಕ ವೃತ್ತಿ ಅಥವಾ ಸ್ವಂತ ಉದ್ಯೋಗ ಮಾಡುತ್ತಿದ್ದರೆ ಅಥವಾ ನೀವು ಯಾವುದೇ ರೀತಿ ಸ್ವಂತ ಉದ್ಯೋಗವನ್ನು ಮಾಡಲು ಬಯಸಿದರೆ ನಿಮಗೆ ಈ ಯೋಜನೆಯ ಮೂಲಕ ಐದರಿಂದ ಏಳು ದಿನಗಳವರೆಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ ಅಂದರೆ ಯಾವ ರೀತಿ ಸ್ವಂತ ಉದ್ಯೋಗ ಮಾಡಬೇಕು ಹಾಗೂ ನಿಮ್ಮ ಉದ್ಯೋಗವನ್ನು ಯಾವ ರೀತಿ ಆಧುನಿಕ ತಂತ್ರಜ್ಞಾನದ ಮೂಲಕ ಇನ್ನಷ್ಟು ಲಾಭದಾಯಕವಾಗಿ ಮಾಡಿಕೊಳ್ಳಬೇಕು. ಮತ್ತು ನಿಮ್ಮ ಉದ್ಯೋಗ ಸಂಬಂಧಿಸಿದಂತೆ ಲಾಭ ಮಾಡಿಕೊಳ್ಳುವುದು ಹೇಗೆ ಇತರ ಅನೇಕ ಮಾಹಿತಿಗಳನ್ನು ಈ ಕೌಶಲ್ಯ ತರಬೇತಿ ನೀಡಲಾಗುತ್ತದೆ

free sewing machine
free sewing machine

 

ಜೊತೆಗೆ ಈ ಕೌಶಲ್ಯ ತರಬೇತಿಗೆ ಹಾಜರಾದ ಕಾರಣ ನಿಮಗೆ ಒಂದು ದಿನಕ್ಕೆ ಐದು ನೂರು ರೂಪಾಯಿ ಕೂಲಿಯಂತೆ ಏಳು ದಿನಕ್ಕೆ ₹3,500 ರೂಪಾಯಿ ಹಣವನ್ನು ನಿಮಗೆ ನೀಡಲಾಗುತ್ತದೆ ಆದ್ದರಿಂದ ಇದು ಒಂದು ವಿಶೇಷವಾದ ಯೋಜನೆ ಎಂದು ಹೇಳಬಹುದು

ಮೂರು ಲಕ್ಷ ರೂಪಾಯಿ ಸಾಲ:- ಹೌದು ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವುದರಿಂದ ನಿಮಗೆ ಇನ್ನೊಂದು ಅತಿ ದೊಡ್ಡ ಲಾಭವೆಂದರೆ ಅದು ಈ ಯೋಜನೆಯ ಮೂಲಕ ಸಿಗುವಂತ ಕಡಿಮೆ ಬಡ್ಡಿ ದರದ ಸಾಲ..! ಮೂರು ಲಕ್ಷ ರೂಪಾಯಿವರೆಗೆ ಕೇವಲ 5% ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ

ಹೌದು ಸ್ನೇಹಿತರೆ ಈ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಮೊದಲು ಒಂದು ಲಕ್ಷ ರೂಪಾಯಿ ಸಾಲವನ್ನು ನೀಡಲಾಗುತ್ತದೆ ಈ ಹಣವನ್ನು 18 ತಿಂಗಳಗಳ ಕಾಲದ ಒಳಗಡೆಯಾಗಿ ಅರ್ಜಿದಾರರು ಅಥವಾ ಫಲಾನುಭವಿಗಳು ಸಾಲ ನೀಡಿದ ಬ್ಯಾಂಕ್ಗಳಿಗೆ ಹಿಂದಿರುಗಿಸಬೇಕು ನಂತರ ಮತ್ತೆ ಎರಡು ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುತ್ತದೆ ಈ ಹಣವನ್ನು 34 ತಿಂಗಳ ಅಂದರೆ ಎರಡು ವರ್ಷಗಳ ಕಾಲದ ಒಳಗಡೆಯಾಗಿ ಸಾಲ ನೀಡಿದ ಬ್ಯಾಂಕ್ ಗೆ ಹಣ ಹಿಂದಿರುಗಿಸಬೇಕು

ಈ ಎಲ್ಲಾ ಲಾಭವನ್ನು ಪಡೆದುಕೊಳ್ಳಬೇಕಾದರೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವೊಂದು ಅರ್ಹತೆಗಳನ್ನು ಹಾಗೂ ಮಾನದಂಡವನ್ನು ಹೊಂದಿರಬೇಕಾಗುತ್ತದೆ ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಕೆಳಭಾಗದಲ್ಲಿ ವಿವರಿಸಿದ್ದೇವೆ

 

ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (free sewing machine)…?
  • PM ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸಿನವರು ಆಗಿರಬೇಕು & 59 ವರ್ಷ ವಯಸ್ಸಿನ ಒಳಗಿನ ವ್ಯಕ್ತಿಗಳಾಗಿರಬೇಕು
  • ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರ ಕುಟುಂಬದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಒಬ್ಬರಿಗೆ ಮಾತ್ರ ಅವಕಾಶ.
  • ಈ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಅಥವಾ ಅರ್ಜಿದಾರರ ಕುಟುಂಬದಲ್ಲಿ ಯಾವುದೇ ರೀತಿ ಸರಕಾರಿ ನೌಕರಿ ಇದ್ದರೆ ಅರ್ಜಿ ಸಲ್ಲಿಸಲು ಬರುವುದಿಲ್ಲ
  • ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವಂತ ಸ್ವಯಂ ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿ ಸಾಲ ಪಡೆದುಕೊಂಡಿರಬಾರದು

 

ಈ ಮೇಲೆ ನೀಡಿದಂತ ಎಲ್ಲಾ ಅರಹತೆಗಳನ್ನು ನೀವು ಹೊಂದಿದ್ದೀರಾ ಹಾಗಾದರೆ ನೀವು ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತವಾಗಿ 15000 ಹಣ ಪಡೆದುಕೊಂಡು ಹೊಲಿಗೆ ಯಂತ್ರ ಖರೀದಿ ಮಾಡಬಹುದು ಹಾಗೂ ಸ್ವಂತ ಉದ್ಯೋಗಕ್ಕಾಗಿ ಮೂರು ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬಹುದು ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲಾತಿಗಳ ವಿವರವನ್ನು ಕೆಳಗಡೆ ನೀಡಲಾಗಿದೆ

 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (free sewing machine)..?

ವೃತ್ತಿ ಪ್ರಮಾಣ ಪತ್ರ:- ಹೌದು ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ವಂಶಪಾರಂಪರಿಕ ವೃತ್ತಿ ಅಥವಾ ಟೈಲರಿಂಗ್ ವೃತ್ತಿ ಮಾಡುತ್ತಿದ್ದೀರಿ ಎಂಬ ಒಂದು ಪ್ರಮಾಣ ಪತ್ರವನ್ನು ನೀವು ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ನೀಡಬೇಕಾಗುತ್ತದೆ ಈ ಪ್ರಮಾಣ ಪತ್ರಕ್ಕಾಗಿ ನೀವು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಈ ಪ್ರಮಾಣ ಪತ್ರವನ್ನು ಸುಲಭವಾಗಿ ಪಡೆದುಕೊಳ್ಳಬಹುದು

ರೇಷನ್ ಕಾರ್ಡ್:- ಹೌದು ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ರೇಷನ್ ಕಾರ್ಡನ್ನು ನೀಡಬೇಕಾಗುತ್ತದೆ ಅಂದರೆ ಬಿಪಿಎಲ್ ಅಥವಾ ಅಂತೋದಯ ರೇಷನ್ ಕಾರ್ಡ್ ಈ ಯೋಜನೆಗೆ ಅರ್ಜಿ ಸಲ್ಲಿಸಲು ವಿಳಾಸದ ಪುರಾವೆಯಾಗಿ ಅಥವಾ ನಿಮ್ಮ ಕುಟುಂಬದ ಸಂಪೂರ್ಣ ಮಾಹಿತಿಗಾಗಿ ಈ ರೇಷನ್ ಕಾರ್ಡ್ ಪುರಾವೆಯನ್ನು ಅರ್ಜಿ ಸಲ್ಲಿಸಲು ನೀಡಬೇಕಾಗುತ್ತದೆ

ಆಧಾರ್ ಕಾರ್ಡ್:- ಹೌದು ಸ್ನೇಹಿತರೆ ಈಗಂತೂ ಆಧಾರ್ ಕಾರ್ಡ್ ಪ್ರತಿಯೊಂದೂ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಮುಖ ದಾಖಲಾತಿಯಾಗಿ ಬಳಸುತ್ತಿದ್ದಾರೆ ಹಾಗಾಗಿ ನೀವು ಈ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬೇಕು ಹಾಗೂ 15,000 ಹಣ ಉಚಿತವಾಗಿ ಪಡೆದುಕೊಳ್ಳಬೇಕು ಮತ್ತು ಈ ಹಣದಿಂದ ಹೊಲಿಗೆ ಯಂತ್ರ ಖರೀದಿ ಮಾಡಬೇಕಾದರೆ ನೀವು ಕಡ್ಡಾಯವಾಗಿ ಆಧಾರ್ ಕಾರ್ಡನ್ನು ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀಡಬೇಕಾಗುತ್ತದೆ

ಬ್ಯಾಂಕ್ ಪಾಸ್ ಬುಕ್ ವಿವರ:- ಹೌದು ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ನೀಡಬೇಕಾದಂತಹ ಇನ್ನೊಂದು ಪ್ರಮುಖ ದಾಖಲಾತಿ ಅಂದರೆ ಅದು ಬ್ಯಾಂಕ್ ಖಾತೆಯ ವಿವರ ಏಕೆಂದರೆ ಈ ಯೋಜನೆ ಮೂಲಕ ವರ್ಗಾವಣೆ ಆಗುವಂತ ಉಚಿತ 15,000 ಹಣ ಹಾಗೂ 3 ಲಕ್ಷ ರೂಪಾಯಿ ಸಾಲ ಪಡೆಯಬೇಕಾದರೆ ನೀವು ಕಡ್ಡಾಯವಾಗಿ ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಯಾವುದಾದರೂ ಬ್ಯಾಂಕ್ ಶಾಖೆಯಲ್ಲಿ ಒಂದು ಬ್ಯಾಂಕ್ ಖಾತೆ ಹೊಂದಿರಬೇಕು ಮತ್ತು ಈ ಖಾತೆಯ ವಿವರವನ್ನು ನೀವು ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ನೀಡಬೇಕಾಗುತ್ತದೆ

ಜಾತಿ ಪ್ರಮಾಣ ಪತ್ರ & ಆದಾಯ ಪ್ರಮಾಣ ಪತ್ರ:- ಅದು ಸ್ನೇಹಿತರ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಅಥವಾ ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಬೇಕಾಗುತ್ತದೆ ಏಕೆಂದರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೇವಲ ಬಡವರಿಗೆ ಮಾತ್ರ ಅವಕಾಶವಿದ್ದು ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ತಿಳಿಯಬೇಕೆಂದರೆ ಆದಾಯ ಪ್ರಮಾಣ ಪತ್ರದಲ್ಲಿ ದಾಖಲಾಗಿರುತ್ತದೆ ಹಾಗಾಗಿ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ

ಮೊಬೈಲ್ ಸಂಖ್ಯೆ:- ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಇರುವಂತಹ ಮೊಬೈಲ್ ಸಂಖ್ಯೆ ನೀಡಬೇಕಾಗುತ್ತದೆ ಏಕೆಂದರೆ ಈ ಯೋಜನೆಗೆ ಸಂಬಂಧಪಟ್ಟಂತೆ ಕೌಶಲ್ಯ ತರಬೇತಿಗೆ ಹಾಗೂ ಇತರ ಯಾವುದೇ ರೀತಿ ಅಪ್ಡೇಟ್ ನೀಡಬೇಕಾದರೆ ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಅಥವಾ ದೂರವಾಣಿ ಕರೆಯ ಮೂಲಕ ಅಧಿಕಾರಿಗಳು ನಿಮಗೆ ಸಂಪರ್ಕಿಸಲು ಸಹಾಯವಾಗುತ್ತದೆ ಹಾಗಾಗಿ ಅರ್ಜಿ ಸಲ್ಲಿಸಲು ಮೊಬೈಲ್ ಸಂಖ್ಯೆ ನೀಡುವುದು

 

ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ (free sewing machine)…?

ಹೌದು ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬೇಕು ಅಂದುಕೊಂಡರೆ ನೀವು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವಂತ ಪಿಎಂ ವಿಶ್ವಕರ್ಮ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು ನಂತರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಬೇಕಾಗುವಂತ ಪ್ರಮುಖ ಲಿಂಕನ್ನು ನಾವು ಕೆಳಗಡೆ ನೀಡಿದ್ದೇವೆ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

ಹೌದು ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಮೇಲೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುತ್ತಿರಿ. ನಂತರ ನೀವು ಅಲ್ಲಿ ಅಪ್ಲೈ ನೋವು ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಿದೆ ಅಂತ ಎಲ್ಲಾ ದಾಖಲಾತಿಗಳ ವಿವರವನ್ನು ಅಪ್ಲೋಡ್ ಮಾಡಿ ನಂತರ ನೀವು ಅಪ್ಲೋಡ್ ಮಾಡಿದ ಎಲ್ಲಾ ದಾಖಲಾತಿಗಳು ಸರಿಯಾಗಿದೆ ಎಂದು ಒಂದು ಸಲ ಕ್ರಾಸ್ ಚೆಕ್ ವೆರಿಫೈ ಮಾಡಿಕೊಳ್ಳಿ ನಂತರ ಸರಿಯಾಗಿದ್ದರೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಈ ಪಿಎಂ ವಿಶ್ವಕರ್ಮ ಯೋಜನೆಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು

ಅಥವಾ

ನಿಮ್ಮ ಹತ್ತಿರದ ಅಥವಾ ನಿಮ್ಮ ಊರಲ್ಲಿ ಇರುವಂತ ಯಾವುದಾದರು ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಹಾಗೂ ಭೇಟಿ ನೀಡುವ ಮುನ್ನ ಮೇಲ್ಗಡೆ ಸೂಚಿಸಲಾದಂತ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಬೇಕಾಗುತ್ತದೆ ನಂತರ ಅಲ್ಲಿ ನೀವು ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದು ಅವರ ಹತ್ತಿರ ಕೇಳಿ ನಂತರ ನಿಮಗೆ ಆನ್ಲೈನ್ ಸೆಂಟರ್ನ ಅವರು ಈ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿ ನಿಮಗೆ ಒಂದು ಅರ್ಜಿ ಸಲ್ಲಿಸಿದ ದಾಖಲಾತಿಯ ಪ್ರಿಂಟ್ ಕೊಡುತ್ತಾರೆ ಇದನ್ನು ನಿಮ್ಮ ಹತ್ತಿರ ಜೋಪಾನವಾಗಿ ಇಟ್ಟುಕೊಳ್ಳಿ

ಏಕೆಂದರೆ ನಿಮ್ಮ ಅರ್ಜಿ ಸ್ಥಿತಿ ಓಕೆ ಆದ ನಂತರ ನಿಮಗೆ ಐದರಿಂದ ಏಳು ದಿನಗಳ ಕಾಲ ಕೌಶಲ್ಯ ತರಬೇತಿಗಾಗಿ ಟ್ರೈನಿಂಗ್ ನೀಡುವ ಉದ್ದೇಶದಿಂದ ನೀವು ನೀಡಿದಂತ ಮೊಬೈಲ್ ನಂಬರ್ ಗೆ ದೂರವಾಣಿ ಕರೆಯ ಮೂಲಕ ಯಾವ ಸ್ಥಳದಲ್ಲಿ ಟ್ರೈನಿಂಗ್ ನೀಡಲಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ನೀಡುತ್ತಾರೆ ಮತ್ತು ಅರ್ಜಿ ಹಾಕಿದ ದಾಖಲಾತಿಯ ವಿವರವನ್ನು ಕೇಳುತ್ತಾರೆ ಹಾಗಾಗಿ ನೀವು ಅರ್ಜಿ ಹಾಕಿದ ದಾಖಲಾತಿ ನೀಡಬೇಕಾಗುತ್ತದೆ

ಸ್ನೇಹಿತರೆ ನೋಡಿದಿರಲ್ಲ ಈ ರೀತಿ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವುದರ ಮೂಲಕ ಉಚಿತವಾಗಿ 15000 ಹಣವನ್ನು ಪಡೆದುಕೊಳ್ಳಬಹುದು ಮತ್ತು ಈ ಹಣದಲ್ಲಿ ನೀವು ತುಂಬಾ ಸುಲಭವಾಗಿ ಒಂದು ಹೊಲಿಗೆ ಯಂತ್ರವನ್ನು ಖರೀದಿ ಮಾಡಬಹುದು ಹಾಗೂ ಈ ಯೋಜನೆಯ ಲಾಭ ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೀರಾ ಅಂದುಕೊಂಡಿದ್ದೇನೆ ಹಾಗಾಗಿ ಆದಷ್ಟು ಈ ಮಾಹಿತಿಯನ್ನು ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳುವವರಿಗೆ ಹಾಗೂ ಸರ್ಕಾರ ಕಡೆಯಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಬಯಸುವವರಿಗೆ ಈ ಯೋಜನೆ ಬಗ್ಗೆ ಮಾಹಿತಿ ನೀಡಲು ಈ ಲೇಖನನ್ನು ಶೇರ್ ಮಾಡಿ

Leave a Comment